ಸರ್ಕಾರದ ಕಾರ್ಯಕ್ರಮಗಳಿಗೆ ನನ್ನನ್ನ ಪರಿಗಣಿಸುತ್ತಿಲ್ಲ ಎಂದು ಸ್ಪೀಕರ್‌ಗೆ ಸಭಾಪತಿ ಹೊರಟ್ಟಿ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 2:30 ರ ಸುಮಾರಿಗೆ ಮಾಧ್ಯಮಗಳ ಜೊತೆ ವಿಧಾನಸೌಧದಲ್ಲಿ ಮಾತನಾಡಿದ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಅವರು, ಬಸವರಾಜ್ ಹೊರಟ್ಟಿ ಅವರು ನನಗಿಂತ ಹಿರಿಯರು, ಅವರು ಅನೇಕ ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ನಾನು ವಿಧಾನಸಭೆ ಇಂದ ಆಯ್ಕೆಯಾದವನು. ನಾವು ಯಾವಾಗಲೂ ಜೊತೆಯಾಗಿದ್ದೇವೆ. ಸೇಫ್ಟಿ ವಿಚಾರ ಬಂದಾಗಲೂ ಚರ್ಚೆ ಮಾಡಿದ್ದೇವೆ. ಲೈಟಿಂಗ್ ಸಂಬಂಧಿಸಿದಂತೆ ಚರ್ಚೆ ಬಂದಾಗಲೂ ಅದನ್ನ ನೋಡಿದ್ದೆ. ಅದು PWD ಇಲಾಖೆಗೆ ಬರಲಿದೆ, ಅದನ್ನ ಅವರು ಮಾಡಿರೋದು. ವಿಧಾನಸೌಧದ ಟೂರ್ ಗೈಡ್ ವಿಚಾರ ಬಂದಾಗ ಎಲ್ಲರ ಜೊತೆ ಮಾತಾಡಿದ್ದೇನೆ,