ಹೈಕೋರ್ಟ್ ಗೆ ಪ್ರತಾಪ್ ಸಿಂಹ ಅರ್ಜಿ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರತಾಪ್ ಸಿಂಹನಿಗೆ ತಿರುಗೇಟು ಕೊಟ್ಟರು. ಯಾವ ಬಿಜೆಪಿ ಸಂಸದರಿಗೆ ಹೋಲಿಸಿದ್ರೂ ಬಾನು ಮುಷ್ತಾಕ್ ಕೊಡುಗೆ ಹೆಚ್ಚೇ ಇದೆ. ಅವ್ರು ದೇಶದ ನಾಗರಿಕರು ಅಲ್ವಾ..? ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮಾಡ್ತಿದ್ದಾರೆ. ಕೆಲವು ಬಿಜೆಪಿ ಸಂಸದರು ಲೆಕ್ಕಕ್ಕಿಲ್ಲ. ಹೀಗೆಲ್ಲಾ ಮಾಡ್ತಾರೆ ಅಂತಾ ಲೆಕ್ಕಕ್ಕೆ ಇಟ್ಟಿಲ್ಲ. ಅವ್ರ ಅಸ್ತಿತ್ವ ಉಳಿಸಿಕೊಳ್ಳಲು ಇದೆಲ್ಲಾ, ಕೆಲಸ ಇಲ್ಲದೇ ಇರೋರು ಮೈ ಪರಚಿಕೊಳ್ಳೋ ಥರ. ಇದರಲ್ಲಿ ರಾಜಕೀಯ ಮಾಡ್ತಿರೋದು ಬಿಜೆಪಿಯವರು ಎಂದರು.