ತಾಲೂಕಿನ ಕಾಡ್ಲೂರಿನ ಕೃಷ್ಣಾನದಿ ತೀರದಲ್ಲಿರುವ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರಿಗೆ ಶ್ರಾವಣಮಾಸದ ಕೊನೆಯ ಶನಿವಾರ ಭಕ್ತರು ಕೃಷ್ಣಾನದಿಯಲ್ಲಿ ಸ್ನಾನ ಮಾಡಿ ಪ್ರಾಣದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪಲ್ಲಕ್ಕಿ ಮಹೋತ್ಸವ ಹಾಗೂ ತೆಪ್ಪೋತ್ಸವ ಕೈಗೊಳ್ಳಲಾಯಿತು. ತಾಲೂಕಿನ ಹುಣಸಿಹಾಳಹುಡಾ ಗ್ರಾಮದ ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಕೊನೆಯ ಶುಕ್ರವಾರ ಮತ್ತು ಶನಿವಾರದಂದು ಹುಡೇದ್ ಆಂಜನೇಯ ಸ್ವಾಮಿಯ ಪಲ್ಲಕ್ಕಿ ಸೇವೆ ಮತ್ತು ಪಾದಯಾತ್ರೆ ಮಾಡಿಕೊಂಡು ಬಂದು ಕಾಡ್ಲೂರು ಸೇರಿದ್ದು, ಅಲ್ಲಿಂದ ಪುನಃ ವಾಪಸ್ಸು ಗ್ರಾಮಕ್ಕೆ ಮರಳಿದರು. ಕಾಡ್ಲೂರು ಗ್ರಾಮದಿಂದ ಹುಣಸಿಹಾಳಹುಡಾ ಗ್ರಾಮಕ್ಕೆ ಮಹಿಳೆಯರು ಮತ್ತು ಯುವಕರು ಸುಮಾರು 40 ಕಿಲೋ ಮೀಟರ್ ದೂರ ನಡೆದು ಬಂದರು.