ನಗರದ ಮೂರನೇ ರೈಲ್ವೆ ಮೇಲ್ಸೇತುವೆ ದುರಸ್ತಿ ಗೊಳಿಸಲಾಗುವುದು ಎಂದು ಉಪ ಮೇಯರ್ ವಾಣಿ ಜೋಶಿ ಅವರು ಹೇಳಿದರು. ನಗರದ ಮೂರನೇ ರೈಲ್ವೆ ಮೇಲ್ಸೇತುವೆ ಹದಗೆಟ್ಟಿದ್ದು, ಶೀಘ್ರದಲ್ಲೇ ಲೋಕೋಪಯೋಗಿ ಇಲಾಖೆಯಿಂದ ದುರಸ್ತಿ ಮಾಡಿಸಲಾಗುವುದು ಎಂದು ಉಪ ಮೇಯರ್ ವಾಣಿ ಜೋಶಿ ಅವರು ಹೇಳಿದರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ರಸ್ತೆ ಹಾಳಾಗಿದ್ದು, ಸ್ಥಳೀಯರ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು