ದೋರನಹಳ್ಳಿ ಗ್ರಾಮದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಶಾಂಭವಿ ಮಾತಾ ಚಿಕ್ಕಮಠದಲ್ಲಿ ಪೂಜ್ಯ ಶ್ರೀ ಶಿವಲಿಂಗ ರಾಜೇಂದ್ರ ಶಿವಾಚಾರ್ಯರ ಧಿವ್ಯ ಸಾನಿಧ್ಯದಲ್ಲಿ ಹಾಗೂ ಗ್ರಾಮದ ಸಮಸ್ತ ಭಕ್ತ ಬಾಂಧವರ ಸಹಕಾರ,ಸಹಯೋಗದಲ್ಲಿ ೨೦೨೫ರ ನವರಾತ್ರಿ ಉತ್ಸವವನ್ನು ಪ್ರತಿವರ್ಷದಂತೆ ಶಿಸ್ತುಬದ್ಧವಾಗಿ,ಸಾಂಪ್ರದಾಯಿಕವಾಗಿ ಹಾಗೂ ವಿಭಿನ್ನವಾದ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲು ತಿರ್ಮಾನಿಸಲಾಗಿದೆ ಎಂದು ಗ್ರಾಮದ ಸದ್ಭಕ್ತರಾದ ವೀರಸಂಗಣ್ಣ ದೇಸಾಯಿ ತಿಳಿಸಿದರು. ತಾಲೂಕಿದ ದೋರನಹಳ್ಳಿ ಗ್ರಾಮದ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಶಾಂಭವಿ ಮಾತಾ ಚಿಕ್ಕಮಠ ದಲ್ಲಿ ಸೆ. ೨೨ ರಿಂದ ಅಕ್ಟೋಬರ್ ೦೧ ರವರೆಗೆ ನವರಾತ್ರಿ ಉತ್ಸವದ ನಿಮಿತ್ತ ಪುರಾಣ-ಪ್ರವಚನ ಲೋಕ ಕಲ್ಯಾಣಾರ್ಥವಾಗಿ ಮಹಾ ಚಂಡಿಕಾಯಾಗ, ಶಾಂಭವಿ ದೇವಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾ