ಕೋಲಾರ ತಾಲೂಕಿನ ಹರಟಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ರೈತರಿಂದ ವಶಕ್ಕೆ ಪಡೆದಿದ್ದ ಜಮೀನಿನಲ್ಲಿ ಬಾನುವಾರ ರೈತರು ಗುಂಡಿ ಮುಚ್ಚಿರುವ ಘಟನೆ ನಡೆದಿದೆ.ನಮ್ಮ ಜಮೀನು ನಮಗೆ ಬೇಕು, ಎಲ್ಲಾ ದಾಖಲೆಗಳು ನಮ್ಮ ಹೆಸರಲ್ಲಿ ಇದೆ,ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಮ್ಮ ಜಮೀನನ್ನು ವಶಕ್ಕೆ ಪಡೆದುಕೊಂಡಿದ್ದಾರೆ,ಯಾವುದೇ ಜಂಟಿ ಸರ್ವೇ ಮಾಡದೆ ಏಕಾಏಕಿ ನಮ್ಮ ಜಮೀನುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ನಮ್ಮ ಪ್ರಾಣ ಹೋದ್ರು ನಮ್ಮ ಜಮೀನುಗಳನ್ನು ಬಿಡುವುದಿಲ್ಲ ಎಂದು ಅರಣ್ಯ ಇಲಾಖೆಯವರು ಗಿಡಿಗಳನ್ನ ನಡೆಲು ತೆಗೆದಿದ್ದ ಗುಂಡಿಗಳನ್ನ ರೈತರು ಮುಚ್ಚಲು ಹೊರಟಿದ್ದು, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದೌಡಾಯಿಸಿ ರೈತರು ಕೆಲಸ ಮಾಡದಂತೆ ಪೊಲೀಸರು ತಡೆದಿದ್ದಾರೆ.