ಕಲಬುರಗಿ : 2019 ರ ಲೋಕಸಭಾ ಚುನಾವಣೆಯಲ್ಲಿ ಸಹ ನನ್ನ ಕ್ಷೇತ್ರ ಕಲಬುರಗಿಯಲ್ಲಿ ಸಹ ಮತಗಳ್ಳತನ ಮತ್ತು ಇವಿಎಮ್ ಮೋಸ ಆಗಿತ್ತು ಅಂತಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.. ಸೆ7 ರಂದು ಬೆಳಗ್ಗೆ 11.30 ಕ್ಕೆ ನಗರದಲ್ಲಿ ಮಾತನಾಡಿದ ಅವರು, ನನ್ನ ಅಭಿವೃದ್ಧಿ ಕಾರ್ಯಗಳನ್ನ ಮೆಚ್ಚಿ ಹೆಚ್ಚಿನ ಮತಗಳನ್ನ ಬರುತ್ತೆ ಅನ್ನೊ ನಿರೀಕ್ಷೆ ಹುಸಿಯಾಗಿದೆ ಅಂತಾ ಖರ್ಗೆ ಹೇಳಿದ್ದಾರೆ.. ಇನ್ನೂ ರಾಜ್ಯದಲ್ಲಿ ಇವಿಎಮ್ ನಿಷೇಧಿಸಿ ಬ್ಯಾಲೇಟ್ ಪೇಪರ್ ಬಳಕೆ ವಿಚಾರವನ್ನ ಖರ್ಗೆ ಸ್ವಾಗತ ಮಾಡಿದ್ದಾರೆ. ಪಾರ್ಲಿಮೆಂಟ್‌ನಲ್ಲೆ ಖರ್ಗೆ ಬಹುತ್ ಬಾರ್ ಜೀತೆ ರಹೇ ಅಂತಾ ಹೇಳಿದಮೇಲೆ ನನಗೆ ಇವಿಎಮ್ ಮೇಲೆ ಮತ್ತಷ್ಟು ಅನುಮಾನ ಬರಲು ಕಾರಣವಾಗಿದೆ ಅಂತಾ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ...