ರಾಯಚೂರು ತಾಲೂಕಿನ ಕೋಮನೂರ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಹಂತ ತಲುಪಿದೆ. ಶಾಲೆಯ ಅವಸ್ಥೆ ಕುರಿತು ಶನಿವಾರ ಮಧ್ಯಾನ ಗ್ರಾಮದ ಜನರು ಬೇಸರ ವ್ಯಕ್ತಪಡಿಸಿ ಶಿಕ್ಷಣ ಇಲಾಖೆ ಶಾಸಕರು ಕೂಡಲೇ ಈ ಶಾಲೆಯತ್ತ ಗಮನಹರಿಸಿ ಶಾಲೆಯ ದುರಸ್ತಿಗೆ ಮುಂದಾಗಬೇಕು, ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಸರಕಾರವೇ ಹೊಣೆಯಾಗಲಿದ್ದು ಕೂಡಲೇ ಶಾಲೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದರು.