ಸಂಡೂರು ತಾಲೂಕಿನ ಪ್ರಸಿದ್ಧ ದರೋಜಿ ಕೆರೆಯು ಇತ್ತೀಚಿನ ಮಳೆಯ ಪರಿಣಾಮ ಸಂಪೂರ್ಣವಾಗಿ ತುಂಬಿಕೊಂಡಿದ್ದು, ಉಕ್ಕಿ ಹರಿಯುತ್ತಿದೆ.ಕೆರೆ ತುಂಬಿ ಹರಿಯುತ್ತಿರುವ ಅದ್ಭುತ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಇನ್ನು ಇಂದು ವಾರಾಂತ್ಯದ ಹಿನ್ನೆಲೆಯಲ್ಲಿ ಹರಿಯುವ ನೀರಿನ ನೋಟವನ್ನು ಸೆರೆ ಹಿಡಿಯಲು ಜನರು ಮೊಬೈಲ್ ಫೋನ್‌ಗಳಲ್ಲಿ ಫೋಟೋ, ವಿಡಿಯೋಗಳನ್ನು ತೆಗೆಯುತ್ತಿರುವ ದೃಶ್ಯ ಆಗಸ್ಟ್ 24, ಭಾನುವಾರ ಮಧ್ಯಾಹ್ನ 1ಗಂಟೆಗೆ ಕಂಡುಬಂತು.ದರೋಜಿ ಕೆರೆ ಈ ಭಾಗದ ಪ್ರಮುಖ ನೀರಾವರಿ ಮೂಲವಾಗಿದ್ದು, ರೈತರಲ್ಲಿ ಸಂತೋಷದ ವಾತಾವರಣವನ್ನುಂಟುಮಾಡಿದೆ.