ಕಮಲಾಪುರ–ಜೀವಣಗಿ ನಡುವೆ ಕೆಸರುಗದ್ದೆಯಂತಾದ ರಸ್ತೆಯಲ್ಲಿ ಲಾರಿಯೊಂದು ಸಿಲುಕಿ ಪರದಾಡಿದ ಘಟನೆ ನಡೆದಿದೆ. ಜೀವಣಗಿ ಕಡೆಗೆ ಸಾಗುತ್ತಿದ್ದ ಲೋಡೆಡ್ ಲಾರಿ ರಸ್ತೆಯ ಮಧ್ಯೆ ಕೆಸರಿನಲ್ಲಿ ಸಿಲುಕಿದ್ದು, ಹೊರತೆಗೆಯಲು ಎರಡು ಜೆಸಿಬಿ ಮತ್ತು ಮೂರು ಕ್ರೇನ್‌ಗಳನ್ನು ಬಳಸುವಂತಾಯಿತು. ಬುಧವಾರ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೂ ರಕ್ಷಣಾ ಕಾರ್ಯ ನಡೆದರೂ ಲಾರಿಯನ್ನು ಹೂಳಿನಿಂದ ತೆಗೆಯಲು ಸಾಧ್ಯವಾಗಲಿಲ್ಲ. ಈ ವೇಳೆ ಒಂದು ಕ್ರೇನ್ ಕೂಡ ಕೆಸರಿನಲ್ಲಿ ಸಿಲುಕಿಕೊಂಡಿತು. ಪರಿಣಾಮವಾಗಿ ಹೆಚ್ಚುವರಿ ಕ್ರೇನ್ ತರಿಸುವ ಅಗತ್ಯ ಎದುರಾಗಿದೆ. ರಸ್ತೆ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿರುವುದರಿಂದ ಬಸ್ ಸಂಚಾರ ಸೇರಿದಂತೆ ವಾಹನ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ರಕ್ಷಣಾ ಕಾರ್ಯದಲ್ಲಿ ಕ್ರೇನ್ ಮತ್ತು ಜೆಸಿಬಿ ವೆಚ್ಚ ಸೇರಿದಂತೆ ಲ