ತುಮಕೂರಿನ ಕ್ಯಾತ್ಸಂದ್ರದ ಪ್ರಸಿದ್ದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಸ್ವರ್ಣ ಗೌರಿಗೆ ಮುತೈದೆಯರು ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಬಳಿಕ ಬಾಗಿನ ಅರ್ಪಣೆ ಮಾಡಿ ಸಂಭ್ರಮದಿಂದ ಗೌರಿ ಹಬ್ಬ ಆಚರಣೆ ಮಾಡಿದರು. ಮಂಗಳವಾರ ಬೆಳಿಗ್ಗೆಯಿಂದಲೇ ನೂರಾರು ಮಹಿಳೆಯರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಧ್ಯಾಹ್ನ 12 ರ ಸಮಯದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಮಹಿಳೆಯರು ಪರಸ್ಪರ ತಾಂಬೂಲ ವಿನಿಮಯ ಮಾಡಿಕೊಂಡರು.ಪಾರ್ವತಿ ದೇವಿಯನ್ನ ಗೌರಿಯಾಗಿ ಪೂಜಿಸುವ ಈ ಹಬ್ಬದಂದು ವಿವಾಹಿತರು ತಮ್ಮ ಪತಿ ಹಾಗೂ ಕುಟುಂಬ ಸುಖ ಶಾಂತಿಯಿಂದ ಇರಲಿ ಎಂದು ಪೂಜಿಸಿದರು.