ನಗರದಲ್ಲಿ ಗಣೇಶ ಮೆರವಣಿಗೆ ಮಾರ್ಗ ಪರಿಶೀಲಿಸಿದ ಶಾಸಕ ಆಸೀಫ್ ಸೇಠ್. ಗಣೇಶ ವಿಸರ್ಜನಾ ಮಾರ್ಗವನ್ನು ಸೋಮವಾರ ಶಾಸಕ ಆಸೀಫ್ ಸೇಠ್ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಹಾಪೌರ ಮಂಗೇಶ್ ಪವಾರ್, ಪಾಲಿಕೆ ಆಯುಕ್ತೆ ಶುಭಾ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು. ಮೆರವಣಿಗೆ ಮಾರ್ಗದಲ್ಲಿನ ರಸ್ತೆ ಅಭಿವೃದ್ಧಿ, ಬೀದಿ ದೀಪಗಳು,ಬೆಳಕಿನ ವ್ಯವಸ್ಥೆ, ವಿಸರ್ಜನಾ ಹೊಂಡಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ಮಹಾಮಂಡಳದೊಂದಿಗೆ ಚರ್ಚಿಸಿ ಯೋಗ್ಯ ಸಲಹೆ ನೀಡಿದರು