ಕ್ಯಾಸಿನಕೆರೆಯಲ್ಲಿ ಹೊಡೆದು ಹೋದ ಭದ್ರಾ ಉಪ ನಾಲೆ ಕಾಲುವೆ: ರೇಣುಕಾಚಾರ್ಯ ಆಕ್ರೋಶ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದ ಭದ್ರಾ ಎಡದಂಡೆಯ ನಾಲೆಯ ಆನವೆರಿ ಉಪ ನಾಲೆಗೆ ಹೋಗುವ ತೊಟ್ಟಿಲು ಕಾಲುವೆ ಎರಡು ದಿನಗಳ ಹಿಂದೆ ಹೊಡೆದು ಹೋಗಿದ್ದು, ಸ್ಥಳಕ್ಕೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಮಾಜಿ ಸಚಿವ ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ತಕ್ಷಣ ಕಾಮಗಾರಿ ಸರಿಪಡಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಹರಿಹಾಯ್ದರು. ನಿನ್ನೆ ಭದ್ರಾಗೆ ಬಾಗಿನ ಅರ್ಪಿಸಿದ ಡಿಸಿಎಂ ಡಿಕೆ ಶಿವಕುಮಾರ್ ಹಸಿ ಸುಳ್ಳುಗಳನ್ನು ಹೇಳಿದರು. ಭದ್ರಾ ಯೋಜನೆಗೆ, ನೀರಾವರಿ ಯೋಜನೆಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಹೋಟಕ್ಕೆ ಕರೆಯಿರಿ ನಾನು ಬರುತ್ತೇನೆ ಎಂದರು