ಬಡವರಿಗೆ ತಲುಪಬೇಕಾಗಿದ್ದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದನ್ನು ಅಧಿಕಾರಿಗಳು ಪತ್ತೆಹಚ್ಚಿರುವ ಘಟನೆ ತಾಲೂಕಿನ ಬಾಳುಪೇಟೆ ಗ್ರಾಮದ ಜಮ್ಮನಹಳ್ಳಿಯಲ್ಲಿ ನಡೆದಿದೆ.ತೀರ್ಥಕುಮಾರ ಅಕ್ರಮವಾಗಿ 660 ಚೀಲ ಪಡಿತರ ಅಕ್ಕಿ ಸಂಗ್ರಹಿಸಿ ಇಟ್ಟಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಆಹಾರ ಶಿರಸ್ತೇದಾರ ದ್ರಾಕ್ಷಾಯಿಣಿ ನಡೆಸಿದ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. ಎಂಬುವರ ಗೋದಾಮಿನಲ್ಲಿ ಹಾಸನದ ಕೈಗಾರಿಕಾ ಪ್ರದೇಶದಲ್ಲಿದ್ದ ಗೋದಾಮಿನಿಂದ 660 ಚೀಲ ಅಕ್ಕಿಯನ್ನು ಪ್ರಮೋದ್ ಕುಮಾರ ಎಂಬುವರ ರಂಗಸ್ವಾಮಿ ಟ್ರಾನ್ಸ್‌ಪೋರ್ಟೈ ಸೇರಿದ ಕೆಎ-19-ಸಿ-7712 ಮತ್ತು ಕೆಎ-19-ಡಿ-9533 ನಂಬರಿನ ಎರಡು ಲಾರಿಗಳಿಗೆ ಬುಧವಾರ ಲೋಡ್ ಮಾಡಲಾಗಿತ್ತು.