ಬೆಳಗಾವಿ ಜಿಲ್ಲೆಯ ಮಲ್ಲೂರು ಗ್ರಾಮದವರಾದ ಮಹೇಶ ಮಾದರ ಎನ್ನುವ ಯುವಕ 20/06/2025 ರಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗುತ್ತಾನೆ ಬಳಿಕ ಬಿಮ್ಸ್ ವೈದ್ಯರು ಯುವಕನನ್ನ ತಪಾಸಣೆ ಮಾಡಿದಾಗ ಅಪೆಂಡಿಕ್ಸ್ ಇದೆ ತಕ್ಷಣ ಆಪರೇಷನ್ ಮಾಡಬೇಕು ಎಂದು ಆಪರೇಷನ್ ಮಾಡುತ್ತಾರೆ ಬಳಿಕ ಹೊಟ್ಟೆಗೆ ನೋವಾಗುತ್ತದೆ ಎಂದು ವೈದ್ಯರಿಗೆ ತಿಳಿಸಿದಾಗ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಾರೆ ನಂತರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದಾಗ ಯುವಕನ ಕರುಳಿಗೆ ಪೆಟ್ಟಾಗಿರುವುದು ಗೊತ್ತಾಗುತ್ತೆ ಆದ್ದರಿಂದ ಯುವಕನಿಗೆ ನ್ಯಾಯ ಕೊಡಿಸುವಂತೆ ಇಂದು ಸೋಮವಾರ 12 ಗಂಟೆಗೆ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಅವರಿಗೆ ಕುಟುಂಬಸ್ಥರಿಂದ ಮನವಿ ಸಲ್ಲಿಸಿದರು.