ನಗರದ ಸರ್.ಎಂವಿ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿರುವ ಮಕ್ಕಳ ಕ್ರೀಡಾ ವಸತಿ ಹಾಸ್ಟೆಲ್ ಒಳಗೆ ಶನಿವಾರ ಬೃಹತ್ ಗಾತ್ರದ ಕೆರೆಹಾವು ಕಾಣಿಸಿಕೊಂಡು ಕೆಲಕಾಲ ವಿಧ್ಯಾರ್ಥಿಗಳು ಹಾಗೂ ಹಾಸ್ಟೆಲ್ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಹಾಸ್ಟೆಲ್ ಸಿಬ್ಬಂದಿ ಹಾವು ಸಂರಕ್ಷಕ ಸ್ನೇಕ್ ರವಿ ಅವರಿಗೆ ಸುದ್ದಿ ಮುಟ್ಟಿಸಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ರವಿ ಹಾವುನ್ನು ರಕ್ಷಣೆ ಮಾಡಿ ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಆತಂಕವನ್ನು ದೂರು ಮಾಡಿದರು.ವಿಷರಹಿತ ಹಾವು ಆದ್ದರಿಂದ ಯಾವುದೇ ತೊಂದರೆ ಇಲ್ಲ, ಕ್ರೀಡಾಂಗಣದ ಸುತ್ತಮುತ್ತಲೂ ಗಿಡಗಂಟೆಗಳು ಬೆಳೆದಿರುವುದರಿಂದ ಈ ಭಾಗದಲ್ಲಿ ಹಾವುಗಳ ಸಂಚಾರ ಸಾಮಾನ್ಯವಾಗಿದ್ದು ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ವಿಧ್ಯಾರ್ಥಿಗಳು ಹೆಚ್ಚಿನ ಜಾಗೃತಿಯಲ್ಲಿ ಇರಬೇಕೆಂದು