ರಾಜ್ಯದ ಅತ್ಯಂತ ಸುದ್ದಿಯಾಗಿರುವ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ವಿದ್ಯಾರ್ಥಿನಿಯರ ವಸತಿ ನಿಲಯದ ಶೌಚಾಲಯದಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಗೆ ಹೆರಿಗೆಯಾಗಿರುವ ಘಟನೆ ನಡೆದಿತ್ತು, ಘಟನೆಗೆ ಸಂಬಂಧಿಸಿದ ಆರೋಪಿ ಎಂದು ಸುರಪುರ ತಾಲೂಕಿನ ಕಕ್ಕೇರ ಪಟ್ಟಣದ ಪರಮಣ್ಣ ಎಂಬ 30 ವರ್ಷದ ಯುವಕನನ್ನು ಬಂಧಿಸಲಾಗಿದೆ. ಈತನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದ್ದು ವಿದ್ಯಾರ್ಥಿನಿಗೆ ಪುಸಲಾಯಿಸಿ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಹೇಳಲಾಗಿದೆ. ಈತನ ಬಂಧನದ ಕುರಿತು ಶಹಾಪುರ ಠಾಣೆಯ ಪಿ ಐ ಶನಿವಾರ ಬೆಳಗ್ಗೆ ದೃಢಪಡಿಸಿದ್ದಾರೆ. ವಿಷಯ ತಿಳಿದು ಮರೆಮಾಚಿದ್ದ ಎನ್ನುವ ಆರೋಪದ ಮೇಲೆ ಬಾಲಕಿಯ ಅಣ್ಣನ ಮೇಲು ಪ್ರಕರಣ ದಾಖಲಾಗಿದೆ ಎನ್ನಲಾಗಿದ್ದು,ಈ ಘಟನೆ ಕುರಿತು ಈಗಾಗಲೇ ನಾಲ್ಕು ಜನರನ್ನು ಅಮಾನತುಗೊಳಿಸಲಾಗಿತ್ತು.