ಮಳಿಗೆಗಳ ಮುಂದೆ ಸಾಲುಗಟ್ಟಿ ನಿಂತಿದ್ದರು.ಈ ವೇಳೆ ಎಷ್ಟೊತ್ತಿಗೂ ಬಾಗಿಲು ತೆಗೆಯದ ಮಳಿಗೆಯ ಸಿಬ್ಬಂದಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಅರ್ಧಕ್ಕೂ ಹೆಚ್ಚು ರೈತರಿಗೆ ಯೂರಿಯಾ ಸಿಗದ ಕಾರಣ ,ಸ್ಥಳಕ್ಕೆ ಆಗಮಿಸಿದ ಕೆಪಿಆರ್ ಎಸ್ ಜಿಲ್ಲಾ ಸಮಿತಿ ಸಂಚಾಲ ಚನ್ನರಾಯಪ್ಪ ,ಮುನಿಸ್ವಾಮಿಯವರು ಸರ್ಕಾರಗಳ ವಿರುದ್ಧ ಗುಡುಗಿದರು. ಕನಿಷ್ಠ ರಸಗೊಬ್ಬರವನ್ನು ರೈತರಿಗೆ ನೀಡಲಾಗದ ಸರ್ಕಾರಗಳು ಯಾವ ಪುರುಷಾರ್ಥಕ್ಕಾಗಿ ರೈತಪರ ಎಂದು ಹೇಳಿಕೊಳ್ಳುತ್ತವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.