ನಷ್ಟದಲ್ಲಿರುವ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಹಾಗೂ ಸಕ್ಕರೆ ಕಾರ್ಖಾನೆಗಳು, ಹಾಲು ಒಕ್ಕೂಟಗಳಿಗೆ ನೆರವು ನೀಡಿ ಅವುಗಳ ಪುನಃ ಶ್ಚೇತನಕ್ಕೆ ಕಾರಣವಾದ ಹೆಗ್ಗಳಿಕೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಸಲ್ಲುತ್ತದೆ. ಪರಿಣಾಮವೇ ಇದೀಗ ರಾಜ್ಯದಲ್ಲೇ ನಮ್ಮ ಬ್ಯಾಂಕ್ ಲಾಭದಲ್ಲಿ 3ನೇ ಸ್ಥಾನ ಪಡೆದಿರುವುದಕ್ಕೆ ಸಾಕ್ಷಿ ಎಂದು ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಸಚಿವರಾದ ಶಿವಾನಂದ ಪಾಟೀಲ ಇದೇ ಸಂದರ್ಭದಲ್ಲಿ ಹೇಳಿದರು...