ಬಿಮ್ಸ್ ಹಾಗೂ ಕೆಎಲ್ಇ ಆಸ್ಪತ್ರೆ ನಡುವೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕುರಿತು ಮಹತ್ವದ ಒಡಂಬಡಿಕೆ ಬೆಳಗಾವಿಯಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ರೆಡಿಯಾಗಿ ಮೂರು ವರ್ಷ ಹಿನ್ನಲೆ ಗುತ್ತಿಗೆ ಆಧಾರದ ನೇಮಕಾತಿ ಪ್ರಕ್ರಿಯೆ ನಡೆಸಿದರು ಬಾರದ ವೈದ್ಯರು ಈ ಹಿನ್ನಲೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಉಚಿತ ವೈದ್ಯರ ಸೇವೆ ನೀಡಲು ಕೆಎಲ್ಇ ತೀರ್ಮಾನ ಮಾಡಿದ್ದು ಬಿಮ್ಸ್ ಹಾಗೂ ಕೆಎಲ್ಇ ನಡುವೆ ಇಂದು ಮಂಗಳವಾರ 11:30 ಗಂಟೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದರು ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ, ಶಾಸಕ ಆಸೀಫ್ ಸೇಠ್ ನೇತೃತ್ವದಲ್ಲಿ ನಡೆದ ಒಡಂಬಡಿಕೆ ಕೆಎಲ್ಇ, ಬಿಮ್ಸ್ ಆಸ್ಪತ್ರೆ ಪ್ರಮುಖ ಅಧಿಕಾರಿಗಳು ಭಾಗಿ ಹಲವು ಷರತ್ತು ವಿಧಿಸಿದ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಿ ಹಸ್ತಾಂತರ.