ಯುವಕರು ವ್ಯಸನಗಳಿಂದ ದೂರ ಇರಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು. ನಗರದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ ಸಭಾಭವನದಲ್ಲಿ ತ್ರಿವಿಧ ದಾಸೋಹಿ ಡಾ. ಮಹಾಂತ ಶಿವಯೋಗಿಗಳ ನಡೆದ ವ್ಯಸನ ಮುಕ್ತ ದಿನಾಚರಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವ್ಯಸನ ಮುಕ್ತ ದಿನಾಚರಣೆ ಕೇವಲ ಒಂದು ಸಾಂಕೇತಿಕ ಆಚರಣೆಗೆ ಸಿಮೀತವಾಗದೇ ಯುವ ಪೀಳಿಗೆಯನ್ನು ವ್ಯಸನ ಮುಕ್ತರಾಗಿ ಮಾಡಬೇಕು ಎಂದರು.