ಇಂದು ಹುಲಿಗೆಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿ ಸಭೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ದೇವಿಯ ದರ್ಶನ ಪಡೆದು ಆಶೀರ್ವಾದವನ್ನು ಕೋರಿ, ದೇವಾಲಯದ ಸಮೀಪ ನಡೆಯುತ್ತಿರುವ ತುಂಗಾಭದ್ರ ಆರತಿ ಕಾರ್ಯಕ್ರಮದ ತಯಾರಿ ಕುರಿತು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಅವರು ಅಧಿಕಾರಿಗಳ ಜೋತೆ ಚರ್ಚೆ ನಡೆಸಿದರು. ಆಗಸ್ಟ್22 ರಂದು ಸಂಜೆ 6-00 ಗಂಟೆಗೆ ತುಂಗಭದ್ರಾ ಆರತಿ ನಡೆಯುವ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿ ದ್ದಾರೆ ಈ ಸಂದರ್ಭದಲ್ಲಿ ಹಲವು ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಹುಲಿಗೆಮ್ಮ ದೇವಿಯ ಭಕ್ತರು ಉಪಸ್ಥಿತರಿದ್ದರು