ವೈರತ್ವ ಉಂಟು ಮಾಡುವ ಬಾಷಣ ಮಾಡಿದ ಶಾಸಕ ಬಸವನಗೌಡ ಯತ್ನಾಳ್ ವಿರುದ್ದ ಮದ್ದೂರಿನಲ್ಲಿ ಎಫ್ ಐ ಆರ್ ದಾಖಲಾಗಿದೆ. ಪಿಎಸ್'ಐ ಮಂಜುನಾಥ್ ಕೆ ದೂರು ದಾಖಲಿಸಿದ್ದಾರೆ ಎಂದು ಎಸ್ಪಿ ಕಚೇರಿ ಮಾಹಿತಿ ನೀಡಿದೆ. ಕಳೆದ ಸೆ.7ರಂದು ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟದಿಂದ ನಡೆದ ಗಲಭೆ ಸಂಬಂಧ ಸೆ.11ರ ಸಂಜೆ ಪಟ್ಟಣದ ಪೇಟೆ ಬೀದಿ ರಾಮಮಂದಿರದ ಮುಂದೆ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಅನ್ಯಕೋಮಿನ, ಧರ್ಮಕ್ಕೆ ದಕ್ಕೆಯಾಗುವಂತೆ ನೋವುಂಟಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾತನಾಡಿದ್ದಾರೆ. ಅಲ್ಲದೆ ವಿವಿಧ ಕೋಮುಗಳ ನಡುವೆ ಪರಸ್ಪರ ವೈರತ್ವ ಉಂಟಾಗುವುದಕ್ಕೆ ಸೇರಿದಂತೆ ಅನ್ಯಧರ್ಮದ ಭಾವನೆಗಳಿಗೆ ದಕ್ಕೆಯಾಗುವಂತೆ ಮಾತನಾಡಿರುವುದು.