ಕಲಬುರಗಿ : ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಅಮೀನ್ ಮುಕ್ತಾರ್ ನನಗೆ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ನಾನು ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆಂದು ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ... ಸೆ13 ರಂದು ಮಧ್ಯಾನ 1 ಗಂಟೆಗೆ ಕಲಬುರಗಿ ನಗರದಲ್ಲಿ ಮಾತನಾಡಿದ ಅವರು, ಸೆ11 ರಂದು ನಾನು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಅಧ್ಯಕ್ಷ ಮಜರ್ ಅಲಂಖಾನ್ ಜೊತೆ ಕುಳಿತ್ತಿದ್ದ ವೇಳೆ ಅಲ್ಲಿಗೆ ಬಂದ ಅಮೀನ್ ಮುಕ್ತಾರ್, ಬಲವಂತವಾಗಿ ಕುರ್ಚಿ ಮೇಲೆ ಕುಡಿಸಿ ನಾನು ಯಾರು ಗೋತ್ತಾ.. ಮಗರ್ ಮಂಚ್.. ನನ್ನ ವಿರುದ್ಧ ಧ್ವನಿ ಎತ್ತಿದವರಿಗೆ ಮುಗುಸಿ ಬಿಡ್ತಿನಿ ಅಂತಾ ಅಮೀರ್ ಮುಕ್ತಾರ್ ಧಮ್ಕಿ ಹಾಕಿದಾರೆಂದು ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.