ಹಾಸನ : ಮೊಬೈಲ್ ಅಡಮಾನ ವಿಷಯಕ್ಕೆ ಹಲ್ಲೆ ಮಾಡಿದ ಸಣ್ಣ ವಿಷಯಕ್ಕೆ ಸ್ನೇಹಿತರೇ ಮತ್ತೊಬ್ಬ ಸ್ನೇಹಿತನನ್ನು ಮಂಗಳವಾರ ರಾತ್ರಿ ಕೊಲೆ ಮಾಡಿದ ಪ್ರಕರಣ ಸಂಬಂಧ ಐವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಯರೇಹಳ್ಳಿ ಬಳಿ ದೇವರಾಯಪಟ್ಟಣದ ಅಂಕಿತ್.ಸಿ.(21) ಎಂಬಾತನನ್ನು ಈ ದುರುಳರು ಕೊಲೆ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ ಪಿ ಮೊಹಮದ್ ಸುಜೀತಾ ಹಂತಕರನ್ನು ಬಂಧಿಸಲು, ಎರಡು ತನಿಖಾ ತಂಡಗಳನ್ನು ರಚನೆ ಮಾಡಿದ್ದರು.ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೊಲೆ ನಡೆದ ಕೇವಲ 24 ಗಂಟೆಗಳಲ್ಲೇ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.