ತುರುವನೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಐದು ಮಂದಿ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯ ಪ್ರದೇಶ ಮೂಲದ ಟೋನಿಯಾ, ಕಮಲ್ ನಾಥ್, ಶ್ರವಣ್ ಜೋಗಿ, ಜೈನನಾಥ್ ಚೌಹಾಣ್ ಹಾಗೂ ಸಂತೋಷ್ ನಾಥ್ ಎಂಬ ಐದು ಮಂದಿ ಕಳ್ಳರನ್ನ ಪೊಲೀಸರು ಬಂದಿಸಿ ಕರೆತಂದಿದ್ದಾರೆ. ರವಿಕುಮಾರ್ ಎಂಬುವವರ ಬಳಿ ಉಂಗುರ ಎಗರಿಸಿ ಪರಾರಿಯಾಗಿದ್ದ ಕಳ್ಳರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ