ಗಣಪತಿ ಹಬ್ಬದ ದಿನದಂದೇ ಕಳ್ಳರು ಕೈ ಚಲಕ ತೋರಿ ಪ್ರಾವಿಷನ್ ಸ್ಟೋರ್ ಗೆ ಕನ್ನ ಹಾಕಿರುವ ಘಟನೆ ಚಾಮರಾಜನಗರದ ರಾಮಸಮುದ್ರದಲ್ಲಿ ನಡೆದಿದೆ. ಚಾಮರಾಜನಗರದ ರಾಮಸಮುದ್ರದ ಮಠದ ಕಟ್ಟಡದಲ್ಲಿ ಮಹೇಶ್ ಎಂಬವರ ಪ್ರಾವಿಷನ್ ಸ್ಟೋರ್ ನಲ್ಲಿ ಕಳ್ಳತನವಾಗಿದ್ದು ಗುರುವಾರ ಬೆಳಗ್ಗೆ ಮಾಲೀಕ ಮಹೇಶ್ ಅಂಗಡಿ ತೆರೆಯಲು ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ. ಗುರುವಾರ ಸ್ಥಳಕ್ಕೆ ಚಾಮರಾಜನಗರ ಪಟ್ಟಣ ಠಾಣೆ ಪೋಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗಡಿಯ ಬೀಗ ಮುರಿದು ಕನ್ನ ಹಾಕಿರುವ ಖದೀಮರು, ಗಲ್ಲಾ ಪೆಟ್ಟಿಗೆಯಲ್ಲಿದ್ದ ನಗದನ್ನು ಕಳವು ಮಾಡಿದ್ದಾರೆ ಇನ್ನಷ್ಟೆ ಕಳವಾದ ಹಣದ ಬಗ್ಗೆ ಮಾಹಿತಿ ಬರಬೇಕಿದೆ. ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.