ಸಂಸ್ಕಾರಕ್ಕೆ ಜಾಗ ಸಿಗದೇ ರಸ್ತೆ ಮೇಲೆ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿರುವ ಘಟನೆ ಶಿಕಾರಿಪುರ ತಾಲೂಕಿನ ಹುಲಗಿನ ಕಟ್ಟೆ ಗ್ರಾಮದಲ್ಲಿ ಬುಧವಾರ ನಡೆದಿದೆ.ಗ್ರಾಮದ ಗಂಗಿಬಾಯಿ ಎಂಬುವರು ಇಂದು ಮೃತಪಟ್ಟಿದ್ದರು.ಅವರ ಶವ ಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.20 ವರ್ಷಗಳ ಹಿಂದೆಯೇ ಸ್ಮಶಾನಕ್ಕೆ ಜಿಲ್ಲಾಡಳಿತ 5 ಎಕರೆ ಜಾಗ ನೀಡಿದೆ. ಆದರೆ ಜಿಲ್ಲಾಡಳಿತ ನೀಡಿರುವ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಇನ್ನ ಶವಸಂಸ್ಕಾರಕ್ಕೆ ಕೂಡಲೇ ಜಾಗ ಗುರುತಿಸಿ ಕೊಡದಿದ್ದರೆ. ರಸ್ತೆ ಮಧ್ಯೆದಲ್ಲೇ ಶವ ಸಂಸ್ಕಾರ ಮಾಡುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.