ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ಹೊಸೂರು ಗ್ರಾಮದ ಸಮೀಪದಲ್ಲಿರುವ ಗೌಡನಕೆರೆಗೆ ಮಂಗಳವಾರ ಯುವಕನೋರ್ವ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಆತನಿಗಾಗಿ ಶೋಧಕದ ಸಿಬ್ಬಂದಿ ನಡೆಸಿದ್ದರು. ಗ್ರಾಮದ ನಿವಾಸಿ ಪ್ರಕಾಶ್ ರವರ ಪುತ್ರ ನಿಶಾಂತ್ ಎಂದು ತಿಳಿದುಬಂದಿತ್ತು. ಆತನ ಮೃತದೇಹವು ಬುಧವಾರ ಕೆರೆಯಲ್ಲಿ ಪತ್ತೆಯಾಗಿದ್ದು ಮೃತ ದೇಹವನ್ನು ಸಿಬ್ಬಂದಿ ಹೊರತೆಗೆದಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ