ಚಿತ್ರದುರ್ಗದಲ್ಲಿ ವರ್ಷಿತಾ ಹತ್ಯೆ ಪ್ರಕರಣ ಈಡೀ ಜಿಲ್ಲೆ ಮಾತ್ರವಲ್ಲದೇ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಆದರೆ ಕೃತ್ಯ ಎಸಗುವ ಮುನ್ನ ಆರೋಪಿ ಮಾಡಿದ ಪಿನ್ ಟು ಪಿನ್ ಪ್ಲಾನಿಂಗ್ ಪಬ್ಲಿಕ್ ಆ್ಯಪ್ ಗೆ ಗುರುವಾರ ಸಂಜೆ 4 ಗಂಟೆ ವೇಳೆ ಲಭ್ಯವಾಗಿದೆ. ಆರೋಪಿ ಚೇತನ್ ಎಂಬಾತ ತನ್ನ ಪ್ರೀಯತಮೆ ವರ್ಷಿತಾ ಜೊತೆಗೆ ಗೋನೂರು ಸಮೀಪಕ್ಕೆ ಹೋಗುವ ಮುನ್ನವೇ ಆಕೆಯನ್ನ ಬೆಂಕಿ ಹಚ್ಚಿ ಸುಟ್ಟು ಹಾಕಲು ಪ್ಲಾನ್ ಮಾಡಿದ್ದ. ಇದಕ್ಕೆ ಪುಷ್ಟಿ ಅನ್ನುವಂತೆ ನಗರದ ಜೆಸಿಆರ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಬಂದು ವಾಟರ್ ಕ್ಯಾನ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೊರಟಿದ್ದ. ಬಳಿಕ ಗೋನೂರು ರಸ್ತೆಯಲ್ಲಿ ಸುಮಾರು 1 ಕಿಲೋ ಮೀಟರ್ ದೂರ ಆಕೆಯ ಜೊತೆ ನಡೆದುಕೊಂಡು ಆಕೆಯನ್ನ ಕರೆದೊಯ್ದಿದ್ದ.