ಶಿರಾದಿಂದ ಹುಳಿಯಾರು, ಪಂಚನಹಳ್ಳಿ, ಸಿಂಗಟಗೆರೆ, ಕಡೂರು, ತರಿಕೆರೆ, ಶಿವಮೊಗ್ಗ, ತೀರ್ಥಹಳ್ಳಿ, ಕುಂದಾಪುರ, ಉಡುಪಿ ಮಾರ್ಗವಾಗಿ ಮಣಿಪಾಲಕ್ಕೆ ನೇರ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಶಾಸಕರಾದ ಟಿ.ಬಿ. ಜಯಚಂದ್ರ ಪತ್ರ ಬರೆದಿದ್ದಾರೆ.ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯು ಆಗಿರುವ ಟಿ. ಬಿ. ಜಯಚಂದ್ರ ಅವರು ಬರೆದಿರುವ ಪತ್ರ ಭಾನುವಾರ ಸಂಜೆ 4 ರ ಸಮಯದಲ್ಲಿ ಮಾಧ್ಯಮಗಳಿಗೂ ಬಿಡುಗಡೆಯಾಗಿದೆ. ಈ ಭಾಗದ ಸಾರ್ವಜನಿಕರಿಂದ ಬಂದ ಮನವಿಯನ್ನು ಪರಿಗಣಿಸಿ, ಜಯಚಂದ್ರ ಅವರು ಶಿರಾ – ಹುಳಿಯಾರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಡ ರೋಗಿಗಳು ಶಿವಮೊಗ್ಗ ಮತ್ತು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿರುತ್ತಾರೆ.