Download Now Banner

This browser does not support the video element.

ಗದಗ: ನಗರದಲ್ಲಿ ವಾಹನದ ಮೇಲೆ ಟ್ರಾಫಿಕ್ ದಂಡ ಹೊಂದಿದವರಿಗೆ ಸಿಹಿ ಸುದ್ದಿ, ಇಲ್ಲಿದೆ ನೋಡಿ ಮಾಹಿತಿ!

Gadag, Gadag | Aug 22, 2025
ವಾಹನದ ಮೇಲೆ ಟ್ರಾಫಿಕ್ ದಂಡ ಇದ್ದರೆ ಸವಾರರಿಗೆ ಸಿಹಿ ಸುದ್ದಿಯನ್ನು ಜಿಲ್ಲಾ ಪೊಲೀಸರು ನೀಡಿದ್ದಾರೆ. ಶೇ. 50 ರಷ್ಟು ರಿಯಾಯಿತಿಯಲ್ಲಿ ಸಂಚಾರಿ ಇ-ಚಲನ್ ದಂಡ ಪಾವತಿಗೆ ಅವಕಾಶ ಮಾಡಲಾಗಿದೆ. ಸರ್ಕಾರದ ಆದೇಶ ಸಂಖ್ಯೆ ಟಿ.ಡಿ 27 ಟಿ.ಡಿ.ಓ 2023 ಬೆಂಗಳೂರು, ದಿ. 21.08.2025 ಅನ್ವಯ, ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ವ್ಯವಸ್ಥೆಯಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳಿಗೆ ಮಾತ್ರ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗಿದೆ. ಈ ರಿಯಾಯಿತಿಯು 23.08.2025 ರಿಂದ 12.09.2025 ರವರೆಗೆ ದಂಡ ಪಾವತಿಸುವವರಿಗೆ ಅನ್ವಯವಾಗುತ್ತದೆ. ದಂಡ ಪಾವತಿಸಲು ಸಂಚಾರಿ ಪೊಲೀಸ್ ಠಾಣೆ ಅಥವಾ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಬಹುದು.
Read More News
T & CPrivacy PolicyContact Us