ದಾಂಡೇಲಿ : ನಗರದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿ ಬೀದಿ ನಾಯಿಗಳ ದಾಳಿಗೊಳಗಾಗಿ ಓರ್ವ ಬಾಲಕ ಸೇರಿದಂತೆ ಮೂವರಿಗೆ ಗಾಯವಾದ ಘಟನೆ ಇಂದು ಬುಧವಾರ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಡೆದಿದೆ. ಸ್ಥಳೀಯ ನಿವಾಸಿ 11 ವರ್ಷದ ಬಾಲಕ ರೋಷನ್ ಜಮೀರ್, 19 ವರ್ಷದ ವಯಸ್ಸಿನ ಯುವತಿ ಆಶಿಕಾ ಮತ್ತು 70 ವರ್ಷ ವಯಸ್ಸಿನ ವೃದ್ಧ ಹುಸೇನ್ ಸಾಬ್ ಎಂಬವರು ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡವರಾಗಿದ್ದಾರೆ. ಗಾಯಗೊಂಡ ಈ ಮೂವರನ್ನು ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗೆ ನಗರಸಭೆಯ ಸದಸ್ಯೆ ಸರಸ್ವತಿ ರಜಪೂತ ಹಾಗೂ ಸ್ಥಳೀಯರು ಭೇಟಿ ನೀಡಿದ್ದಾರೆ.