ನೀರಿಗಾಗಿ ನಾಳೆ ಏಕೆಆರ್ ಎಸ್,ಕರವೇ ಸಂಘಟನೆಗಳ ವತಿಯಿಂದ ಬೈಕ್ ಜಾಥಾ ಕುರಿತು ಗೌರಿಬಿದನೂರು ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿಯನ್ನು ಮುಖಂಡರು ಇಂದು ಹಂಚಿಕೊಂಡಿದ್ದಾರೆ. ತಾಲೂಕಿನ ಹನುಮೇನಹಳ್ಳಿ,ಅಲಕಾಪುರ ಸಮೀಪ ಇರುವ ದ್ಯಾವಪ್ಪನ ಕೆರೆ ಪ್ರದೇಶದಲ್ಲಿ ಡ್ಯಾಂ ನಿರ್ಮಾಣ ಮಾಡಬೇಕೆಂದು ಸುಮಾರು 15 ವರ್ಷಗಳಿಂದ ಒತ್ತಾಯ ಕೇಳಿ ಬಂದಿದ್ದು, ಡಿಪಿಆರ್ ಮಾಡಲಾಗಿತ್ತು. ಆದರೆ ಮುಂದಿನ ಯಾವುದೇ ಪ್ರಗತಿ ಕಾರ್ಯಗಳು ನಡೆಯದ ಹಿನ್ನಲೆಯಲ್ಲಿ ಬೈಕ್ ಜಾಥಾ ನಡೆಸಲಾಗುತ್ತದೆ ಎಂದು ಸಂಘಟಕರು ತಿಳಿಸಿದರು.