ದಾಂಡೇಲಿ : ಅತ್ತಿವೇರಿ ಬಸವಧಾಮದ ಪೂಜ್ಯ ಬಸವ ರಾಜೇಶ್ವರಿ ಮಾತಾಜಿ ಅವರ ದಿವ್ಯ ಸಾನಿಧ್ಯದಲ್ಲಿ ಮುಂಡಗೋಡದಲ್ಲಿ ಏರ್ಪಡಿಸಿರುವ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಲು ದಾಂಡೇಲಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ವೀರಶೈವ ಸಮಾಜ ಬಾಂಧವರು ಇಂದು ಶನಿವಾರ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಕೋಗಿಲಬನದ ಶ್ರೀ ಮೃತ್ಯುಂಜಯ ಮಠದಲ್ಲಿ ಸ್ತ್ರೀ ಸ್ವಾಮಿಗೆ ವಿಶೇಷ ಪೂಜೆಯನ್ನು ನೆರವೇರಿಸಿ ಹೊರಡಿದ್ದಾರೆ. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ದಾಂಡೇಲಿ ತಾಲೂಕು ಅಧ್ಯಕ್ಷರಾದ ಸಿದ್ದಪ್ಪ ಕುರಗುಂದ, ಶ್ರೀ ವೀರಶೈವಾ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಉಪಾಧ್ಯಕ್ಷ ನಂದೀಶ ಮುಂಗರವಾಡಿ, ಪ್ರಧಾನ ಕಾರ್ಯದರ್ಶಿ ಚಂದ್ರು ಮಾಳಿ ಮೊದಲಾದವರಿದ್ದರು.