ಯಾದಗಿರಿ ಜಿಲ್ಲೆಯ ಜನತಾ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ಮಣ್ಣಿನ ಅಥವಾ ರಾಸಾಯನಿಕ ಬಣ್ಣ ಬಳಿದಿರುವ ಗಣಪನ ಮೂರ್ತಿಗಳನ್ನು ಕೂಡಿಸದೆ ಮಣ್ಣಿನಿಂದ ಮಾಡಿದ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಮನವಿ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ಯಾದಗಿರಿ ನಗರದ ತಮ್ಮ ಕಚೇರಿಯಲ್ಲಿ ಹೇಳಿಕೆ ನೀಡಿ, ಯಾದಗಿರಿಯ ಎರಡು ಸಂಸ್ಥೆಗಳು ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ಗಣೇಶನ ನೀಡುತ್ತಿದ್ದು ಅವುಗಳನ್ನು ತೆಗೆದುಕೊಂಡು ಪ್ರತಿಷ್ಠಾಪಿಸುವ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಿಸುವಂತೆ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ.