Download Now Banner

This browser does not support the video element.

ಮಾನ್ವಿ: ಪಟ್ಟಣದಲ್ಲಿ ಅಮಾನವೀಯ ಘಟನೆಗೆ ಬೆಚ್ಚಿಬಿದ್ದ ಜನತೆ, ನವಜಾತ ಶಿಶುವಿನ ಮೃತದೇಹ ಪತ್ತೆ

Manvi, Raichur | Aug 20, 2025
ಪಟ್ಟಣದ 19 ನೇ ವಾರ್ಡಿನ ಶ್ರೀ ಚೌಡೇಶ್ವರಿ ದೇವಸ್ಥಾನದ ಹತ್ತಿರದ ಬಯಲು ಜಾಗದಲ್ಲಿ ಆಗಸ್ಟ್ 20 ರ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಘಟನೆಯನ್ನು ಗಮನಿಸಿದ ನಾಗರಿಕರು ತಕ್ಷಣವೇ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು , ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ಕುಮಾರ ಅವರು ಶಿಶುವನ್ನು ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದರು. ಆದರೆ ಪರಿಶೀಲನೆ ವೇಳೆ ಮಗು ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ ಎನ್ನಲಾಗಿದೆ. ನವಜಾತ ಶಿಶುವಿನ ಪಾಲಕರ ಪತ್ತೆಹಚ್ಚುವ ಕಾರ್ಯದಲ್ಲಿ ಮಾನ್ವಿ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ
Read More News
T & CPrivacy PolicyContact Us