ಕಲಬುರಗಿ : ನಗರದಲ್ಲಿರುವ ಖಾಸಗಿ ಶಾಲೆಗಳ ಶಾಲಾ ವಾಹನಗಳಲ್ಲಿ ಹೋಗುವ ಮಕ್ಕಳ ಸುರಕ್ಷತೆಗಾಗಿ ವಾಹನದ ವೇಗ 40ಕ್ಕೆ ಮಿತಿಗೊಳಿಸಿ ಜಿಲ್ಲಾಧಿಕಾರಿಗಳು ಶಾಲಾ ಆಡಳಿತ ಮಂಡಳಿಗೆ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ಸಂಘಟನಾ ವೇದಿಕೆಯ ರಾಜ್ಯಾಧ್ಯಕ್ಷ ಗುರು ಬಂಡಿ ಆಗ್ರಹಿಸಿದ್ದಾರೆ.. ಸೆ13 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಕಳೆದೊಂದು ವರ್ಷದಿಂದ ನಗರದಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿದ್ದು ಅತಿವೇಗ ಮತ್ತು ಬ್ರೇಕ್ ಫೇಲ್‌ನಿಂದಾಗಿ ಅವಘಡಗಳು ಸಂಭವಿಸುತ್ತಿದ್ದು, ಕೂಡಲೇ ಇದರ ಮೇಲೆ ನಿಗಾ ವಹಿಸಬೇಕೆಂದು ಗುರು ಬಂಡಿ ಆಗ್ರಹಿಸಿದ್ದಾರೆ.