ಮರಾಠಾ ಸಮುದಾಯದ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು. ಶನಿವಾರ ನಗರದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯುವ ಜನತೆ ಶಿವಾಜಿ ಮಹಾರಾಜರ ಇತಿಹಾಸ ತಿಳಿಯಬೇಕು. ಶಿವಾಜಿ ಮಹಾರಾಜರ ಶೌರ್ಯ, ಹೋರಾಟ ನಮ್ಮ ದೇಶದ ಅಖಂಡತೆಗೆ ಕಾರಣವಾಗಿದೆ. ಶಿವಾಜಿ ಮಹಾರಾಜರ ಆದರ್ಶಗಳನ್ನು ದೇಶ ಮರೆಯುವುದಿಲ್ಲ ಎಂದರು.