ಡಿ.ಜೆ ಹಾಕಲು ಅವಕಾಶ ನೀಡಲೇಬೇಕು, ಈ ಸಂಬಂಧ ನಾಳೆ ಸಭೆ: ಹೊನ್ನಾಳಿಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಒಂದು ದಿನ ಡಿಜೆ ಹಾಕಿ, ಕುಣಿದು ಯುವಕರು ಗಣಪತಿಗೆ ಭಕ್ತಿ ಸಮರ್ಪಿಸುತ್ತಾರೆ. ಆದರೆ ಈ ಸರ್ಕಾರ, ಜಿಲ್ಲಾಡಳಿತ ಅದನ್ನು ಬ್ಯಾನ್ ಮಾಡಿದ್ದು, ಡಿಜೆ ಹಾಕಲು ಅವಕಾಶ ನೀಡಲೇಬೇಕು ಎಂದು ಮಾಜಿ ಸಚಿವ ರೇಣುಕಾಚಾರ್ಯ ಒತ್ತಾಯಿಸಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಬುಧವಾರ ಸಂಜೆ 4 ಗಂಟೆಗೆ ಮಾತನಾಡಿದ ಅವರು, ಡಿಜೆ ಬ್ಯಾನ್ ಸಂಬಂಧ ನಾಳೆ ಗುರುವಾರ ದಾವಣಗೆರೆಯಲ್ಲಿ ಮುಖಂಡರ ಸಭೆ ಇರಲಿದ್ದು, ಡಿಜೆ ಹಾಕಲು ಅವಕಾಶ ನೀಡಲು ಒತ್ತಾಯಿಸಲಾಗುವುದು. ಅವಕಾಶ ನೀಡದೆ ಇದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದರು.