ಧರ್ಮಸ್ಥಳ ಪ್ರಕರಣ ತನಿಖೆಗೆ NIAಗಿಂತ ರಾಜ್ಯದ ಪೊಲೀಸರೇ ಸಮರ್ಥರು ಎಂದು ಶಾಸಕ ಕದಲೂರು ಉದಯ್ ಹೇಳಿದರು. ಕೆ. ಹಾಗಲಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಧರ್ಮಸ್ಥಳ ಪ್ರಕರಣವನ್ನು NIA ಗೆ ವಹಿಸುವಂತೆ ಒತ್ತಾಯಿಸಿರುವ ಕುರಿತು ಪ್ರತಿಕ್ರಿಯಿಸಿದರು. ರಾಜ್ಯದ ಪೊಲೀಸರೇ ಸತ್ಯಾಸತ್ಯತೆ ಹೊರಗೆಡವಿದ್ದಾರೆ. NIA ಅವಶ್ಯಕತೆ ಇಲ್ಲ. ಪೊಲೀಸರ ತನಿಖೆ ವಿವರ ತಿಳಿಯುತ್ತಿದೆ. ಆದರೆ ಸಿಬಿಐ, NIA ತನಿಖೆಯ ವಿವರಗಳೇ ತಿಳಿಯುವುದಿಲ್ಲ ಎಂದು ಟೀಕಿಸಿದರು.