ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಗ್ರಾಮದಲ್ಲಿ. ಕೆಲವು ವರ್ಷಗಳ ಹಿಂದೆ ಇಲ್ಲಿ ಉದ್ಯಮಿಯೋರ್ವರು ಮೀನು ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲು ಹೊರಟಿದ್ದರು. ಇಲ್ಲಿನ ಸ್ಥಳೀಯರ ಜೊತೆ ಪಟ್ಟಣ ಪಂಚಾಯತ್ ನಿಂತು ಸಿ ಆರ್ ಝಡ್ ಕಾನೂನು ಅಡಿಯಲ್ಲಿ ವಿರೋಧ ವ್ಯಕ್ತಪಡಿಸಿ ನಿರ್ಮಾಣ ಹಂತದಲ್ಲಿದ್ದ ಮೀನು ಸಂಸ್ಕರಣಾ ಘಟಕವನ್ನು ಮುಚ್ಚಿಸಲಾಗಿತ್ತು. ಆದರೆ ಈಗ ಅದೇ ಮೀನು ಸಂಸ್ಕರಣ ಘಟಕವನ್ನು ಖರೀದಿ ಮಾಡಿರುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಲ್ಲಿ ಘನ ಮತ್ತು ದ್ರವ ತ್ಯಾಜ್ಯ ಘಟಕ ಆರಂಭಿಸಿದೆ.