ಚನ್ನರಾಯಪಟ್ಟಣ: ಕುಖ್ಯಾತ ರೌಡಿ ಶೀಟರ್ ಯಾಚೇನಹಳ್ಳಿ ಚೇತು ಅಲಿಯಾಸ್ ಚೇತನ್ ಮತ್ತೆ ಜೈಲು ಪಾಲಾಗಿದ್ದಾನೆ.ತಾಲೂಕಿನ ಮತ್ತೊಬ್ಬ ರೌಡಿ ಶೀಟರ್ ಮಾಸ್ತಿ ಕೊಲೆ ಪ್ರಕರಣದಲ್ಲಿ ಈತನ ವಿರುದ್ಧ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿತ್ತು. ಆದೇ ಪ್ರಕರಣದಲ್ಲಿ ಚೇತನ್ ಮತ್ತು ಇತರೆ 9 ಮಂದಿ ಆರೋಪಿಗಳ ವಿರುದ್ಧ ಪಟ್ಟಣದ ನಾಲ್ಕನೇ ಸೆಷನ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದಲ್ಲದೇ ಹಿಂದೆ ಹಲವಾರು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಈತ ಮೊದಲೇ ಜೈಲು ಸೇರಿದ್ದ.ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಚೇತು, ತನ್ನ ವಕೀಲರ ಮೂಲಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.