ಜೇನು ತಿನ್ನಲು ಹೋಗಿ ಬಾವಿಗೆ ಬಿದ್ದ ಕರಡಿಗಳು; ಕಾರ್ಯಾಚರಣೆ ಮೂಲಕ ರಕ್ಷಣೆ ಹೊಸದುರ್ಗ: ಜೇನು ತಿನ್ನಲು ಹೋಗಿದ್ದ ಕರಡಿ ಮತ್ತು ಅದರ ಮರಿ ಬಾವಿಗೆ ಬಿದ್ದಿರುವ ಘಟನೆ ಶುಕ್ರವಾರ ಮುಂಜಾನೆ ತಾಲ್ಲೂಕಿನ ಯಾದಘಟ್ಟ ಗ್ರಾಮದಲ್ಲಿ ನಡೆದಿದ್ದು, ಕರಡಿಗಳನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಲಾಗಿದೆ. ಊರ ಮುಂದೆ ಸುಮಾರು 30.ಅಡಿ ಆಳದ ಬಾವಿಯಲ್ಲಿ 10 ಅಡಿಗೂ ಹೆಚ್ಚು ನೀರು ತುಂಬಿದೆ. ಬಾವಿಯ ಕಟ್ಟೆಯ ಒಂದು ಮೂಲೆಯಲ್ಲಿ ಜೇನು ಗೂಡು ಕಟ್ಟಿದೆ. ಜೇನು ತಿನ್ನಲು ಹೋಗಿದ್ದ ಕರಡಿಯ ಮರಿ ಆಯತಪ್ಪಿ ಬಾವಿಗೆ ಬಿದ್ದಾಗ, ಅದನ್ನು ರಕ್ಷಿಸಲು ಹೋದ ತಾಯಿ ಕರಡಿ ಬಿದ್ದಿದೆ.