ಲಕ್ಷೇಶ್ವರದ ದರ್ಗಾಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದ ಯುವತಿಯೊಬ್ಬಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾವೇರಿ ತಾಲೂಕು ಕೊರಡೂರ ಗ್ರಾಮದ 22 ವರ್ಷದ ಯುವತಿ ಕಾಣೆಯಾಗಿದ್ದಾರೆ. ಈಕೆ ಮನೆಯಲ್ಲಿ ದರ್ಗಾಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ವಾಪಾಸ್ ಮನೆ ಬಂದಿಲ್ಲ. ಮನೆಯವರು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಹೊಸರಿತ್ತಿಯರಾಜು ಎಂಬ ಯುವಕನೊಂದಿಗೆ ಹೋಗಿರಬಹುದೆಂಬ ಅನುಮಾನವಿದ್ದು, ಪತ್ತೆ ಮಾಡಿಕೊಡುವಂತೆ ಯುವತಿಯ ಅಣ್ಣಸಚಿನ ಕೆಂಚನಗೌಡ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..