ಕಳ್ಳತನ ವಾಗಿದ್ದ 22 ಬೈಕ್ ಗಳನ್ನ ಪತ್ತೆ ಮಾಡುವಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪೊಲೀಸರು ಯಶಸ್ವಿಯಾಗಿದ್ದಾರೆ.ಜಮಖಂಡೊ ಶಹರ್ ಹಾಗೂ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ವಾಗಿದ್ದ ಅಂದಾಜು ಹತ್ತು ಲಕ್ಷ ಮೌಲ್ಯದ ವಿವಿಧ ಕಂಪನಿಗಳ 22 ಬೈಕಗಳನ್ನ ಪತ್ತೆ ಮಾಡಿದ್ದಾರೆ.ಇನ್ನು ಕಳ್ಳತನ ಮಾಡಿದ್ದ ಜಮಖಂಡಿ ತಾಲೂಕಿನ ಇನಾಂ ಹಂಚಿನಾಳ ಗ್ರಾಮದ ಕಳ್ಳ ಸಿದ್ದಪ್ಪ ಉಪ್ಪಲದಿನ್ನಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.ಕಳೆದ ಜೂನ್ 9.ರಂದು ಜಮಖಂಡಿ ನಗರದ ಕೋಷ್ಠಿ ಗಲ್ಲಿಯಲ್ಲಿ ಅಪ್ಪಾಸಾಹೇಬ್ ಬಿರಾದಾರ ಎನ್ನುವವರ ಬೈಕ್ ಕಳ್ಳತನವಾಗಿತ್ತು.ಅವರು ಈ ಕುರಿತು ಶಹರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.