ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ನಿವಾಸದ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಭಸಿದಂತೆ ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಚಳ್ಳಕೆರೆಯಲ್ಲಿ ಸಹೋದರ ಕೆ.ಸಿ.ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ದಾಳಿ ಏಕೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ,ಅವರು ಏನೇ ಕೇಳಿದ್ರು ಕೂಡಾ ನಾವು ಸಹಕಾರ ಮಾಡುತ್ತೇವೆ.ನಾನು ಬೆಂಗಳೂರಿಂದ ವಿಷಯ ತಿಳಿದು ಬಂದಿದ್ದೇನೆ,ಶಾಸಕರು ಕೂಡಾ ಬೆಂಗಳೂರಿಂದ ಆಗಮಿಸುತ್ತಾರೆ,ದಾಳಿ ಯಾವ ಕಾರಣಕ್ಕೆ ಮಾಡಿದ್ದಾರೆ ಎಂದು ನಮಗೆ ಗೊತ್ತಿಲ್ಲ,ರಾಜಕೀಯ ಅಂತ ಏನಿಲ್ಲ, ನಮಗೆ ಈ ಬಗ್ಗೆ ಗೊತ್ತಿಲ್ಲ,ನಾನಂತೋ ಯಾವುದೇ ವಿಷಯ ಕೇಳಿದ್ರು ಉತ್ತರ ನೀಡಲು ಸಿದ್ದನಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.