ಕೊಪ್ಪಳ ಗ್ರಾಮೀಣ ರಾಣಾ ವ್ಯಾಪ್ತಿಯ ಇರಕಲ್ಲಗಡ ಹೊರವಲಯದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಹಿತಿ ಮೇರೆಗೆ ದಾಳಿ ಮಾಡಿ ನಿಂಗಪ್ಪ ತಂದಿ ಮರಿಯಪ್ಪ ಗುರಿಕಾರ ವಯಸ್ಸು 50 ಮಾರುತಿ ತಂದೆ ನಿಂಗಪ್ಪ ಗುರಿಕಾರ ವಯಾ-26 ವರ್ಷ ಇರಕಲ್ಲಗಡ. ರವಿ ತಂದೆ ನಿಂಗಪ್ಪ ಗುರಿಕಾರ ವಯಾ-20 ವರ್ಷ ಇರಕಲ್ಲಗಡ. ನಾಗಪ್ಪ ತಂದೆ ಸಣ್ಣ ಯಮನೂರಪ್ಪ, ಕುದುರಿಮೋತಿ ವಯಾ-38 ವರ್ಷ ಇರಕಲ್ಲಗಡ ಇವರನ್ನು ದಸ್ತಗಿರಿ ಮಾಡಿ ಬಂದಿಸಿದ್ದಾರೆ. ಇವರಿಂದ 25,200/- ರೂ ಬೆಲೆ ಬಾಳುವ 830 ಗ್ರಾಂ ಗಾಂಜಾ ಮತ್ತು 15 ಗಂಜಾ ಗಿಡ ಸಸಿಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ.