ತಾಲೂಕಿನ ಅಸುಂಡಿ ಗ್ರಾಮದ ಮನೆಯಲ್ಲಿ ಟ್ರಜ್ಯೂರಿಯಲ್ಲಿ ಇಟ್ಟಿದ್ದ ಗೋಲ್ಡ್ ಕ್ವಾಯಿನ್ ಹಾಗೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಅಸುಂಡಿ ಗ್ರಾಮದ ಪುಷ್ಪಾ ಮಠದ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ. 31 ಸಾವಿರ ನಗದು ಹಾಗೂ 50 ಸಾವಿರ ಬೆಲೆಬಾಳುವ ಗೋಲ್ಡ್ ಕ್ವಾಯಿನ್ ಗಳನ್ನೂ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.