Download Now Banner

This browser does not support the video element.

ರಾಯಚೂರು: ನೆಲಹಾಳ, ದಿನ್ನಿಯಲ್ಲಿ 48 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದ ಶಾಸಕ ಬಸನಗೌಡ ದದ್ದಲ್

Raichur, Raichur | Sep 9, 2025
ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಸೆ.9ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ದಿನ್ನಿ ಮತ್ತು ನೆಲಹಾಳ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ 48 ಕುಟುಂಬಗಳಿಗೆ ಪುನರ್ವಸತಿ ನಿವೇಶನ ಹಕ್ಕಪತ್ರಗಳ ವಿತರಣೆ ಮಾಡಿದರು. ಇದೆ ವೇಳೆ ಶಾಸಕರು, ನೆಲಹಾಳ ಗ್ರಾಮದಲ್ಲಿ ನೂತನ 2 ಶಾಲಾ ಕೊಠಡಿಗಳ ಕಾಮಗಾರಿ, ಮುಖ್ಯರಸ್ತೆಗೆ ಹೊಂದಿಕೊಂಡ ಸಿಸಿ ರಸ್ತೆ ಕಾಮಗಾರಿ ಜೊತೆಗೆ ಜಲಧಾರೆ ಯೋಜನೆಯ ಕಾಮಗಾರಿಗಳ ವೀಕ್ಷಣೆ ಮಾಡಿದರು. ಈ ವೇಳೆ ಶಾಸಕರು ಮಾತನಾಡಿ, ಸುಮಾರು ವರ್ಷಗಳಿಂದ ಗ್ರಾಮದ ನಿವಾಸಿಗಳು ನಿವೇಶನದ ಹಕ್ಕುಪತ್ರಗಳ ಬೇಡಿಕೆ ಇಟ್ಟಿದ್ದರು. ಗ್ರಾಮೀಣ ವಾಸಿಗಳ ಬೇಡಿಕೆಯು ನ್ಯಾಯಯುತವಾಗಿದೆ ಎಂದು ಗ್ರಾಮಸ್ಥರ ಆಶೋತ್ತರಕ್ಕೆ ಸ್ಪಂದಿಸಿ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು
Read More News
T & CPrivacy PolicyContact Us